ಉಡುಪಿ, ಆ.23: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಮೂರು ಸಾವಿರ ರೂ. ಕೊಟ್ಟು ಉಡುಪಿ ಸೀರೆ ಖರೀದಿಸಿದರು.
ನಗರದ ಪಿಸಿಸಿ ಕಾಲೇಜಿನಲ್ಲಿ ಆಯೋಜಿಸಿದ ವಸ್ತು ಪ್ರದರ್ಶನದಲ್ಲಿ ಸೀರೆ ಮಳಿಗೆಗೆ ಭೇಟಿ ಮಾಡಿದ ಅವರು, ವಿವಿಧ ಬಣ್ಣದ ಕೈಮಗ್ಗದ ಉಡುಪಿ ಸೀರೆಗಳನ್ನು ಹುಡುಕಿದರು.
ಬಳಿಕ ಹಸಿರು ಬಣ್ಣದ ಗೆರೆ ಗೆರೆಯ ಸೀರೆಯನ್ನು ಆಯ್ಕೆ ಮಾಡಿ ಖರೀದಿ ಮಾಡಿದರು.
ಕೈಮಗ್ಗದ ಸೀರೆಗಳನ್ನು ವೀಕ್ಷಣೆ ಮಾಡಿದ ಅವರು ವಿನ್ಯಾಸ ಮತ್ತು ಬಣ್ಣಗಳ ಬಗ್ಗೆೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಪಕ್ಕದ ಮಳಿಗೆಗೆ ಭೇಟಿ ಕೊಟ್ಟು ಅನ್ನ ಬಸಿಯುವ ಎರಡು ಬಟ್ಟಿಯನ್ನು ಖರೀದಿಸಿದರು.