ಉಡುಪಿ, ಆ 24: ಪಾರ್ಟ್ ಟೈಂ ಜಾಬ್ ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಸುಮಾರು 1,13,300 ರೂ. ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯ ಮಹಿಳೆಯೊರ್ವರ ಮೊಬೈಲ್ ಗೆ ಆಗಸ್ಟ್ 19 ರಂದು ಯಾರೋ ಅಪರಿಚಿತ ವ್ಯಕ್ತಿಗಳು ಮೊಬೈಲ್ ನಂಬ್ರ 8874836643 ರಿಂದ ವಾಟ್ಸ್ ಆಪ್ ಮೆಸೆಜ್ ಮಾಡಿ, ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ನಂಬಿಸಿ,ಬಳಿಕ Telegram ನಲ್ಲಿ ಲಿಂಕ್‌ನ್ನು ಕಳುಹಿಸಿ ಆಗಸ್ಟ್ 20 ರಿಂದ ಆಗಸ್ಟ್ 21 ರ ಮದ್ಯಾವಧಿಯಲ್ಲಿ ಒಟ್ಟು ರೂಪಾಯಿ 1,13,300 ಹಣವನ್ನು ಆನ್ ಲೈನ್ ಮುಖೇನ ಹಂತ ಹಂತವಾಗಿ ಪಡೆದು, ಉದ್ಯೋಗ ನೀಡದೇ, ಪಡೆದ ಹಣವನ್ನು ವಾಪಾಸು ನೀಡದೆ ಮೋಸ ಮಾಡಿರುವುದಾಗಿದೆ.
ಈ ಕುರಿತು ಉಡುಪಿ ಸೆನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.