ಯುವ ಕಬಡ್ಡಿ ಆಟಗಾರನ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ :‘ ಬೇಬಿ ಫಾರ್ ಸೇಲ್’ ಎಂದು ಕಿರುಕುಳ ನೀಡಿದ್ದ ಲೋನ್ ಆ್ಯಪ್

ಮಂಗಳೂರು : ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಪುದುವೆಟ್ಟುವಿನಲ್ಲಿ ನಡೆದಿದೆ.

ಸ್ವರಾಜ್(24) ಆತ್ಮಹತ್ಯೆ ಮಾಡಿಕೊಂಡ ಯುವಕ. ಸ್ವರಾಜ್ ನಿನ್ನೆ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಲೋನ್ ಆ್ಯಪ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.


ಲೋನ್ ಆ್ಯಪ್ ನಿಂದ ‘Baby for sale’ ಅಂತಾ ಕಿರುಕುಳ ಬೇಸತ್ತು ನೇಣು ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.

‘ಬೇಬಿ ಫಾರ್ ಸೇಲ್’

ಸ್ವರಾಜ್ ವಾಟ್ಸ್ಆ್ಯಪ್ನಲ್ಲಿ ಅಕ್ಕನ ಮಗಳ ಫೋಟೊ ಹಾಕಿದ್ದ. ಈ ಫೋಟೋವನ್ನು ಲೋನ್ ಆ್ಯಪ್ ಖದೀಮರು ‘Baby for sale’ ಅಂತಾ ಎಡಿಟ್ ಮಾಡಿ ಆತನ ಸ್ನೇಹಿತರು ಮತ್ತು ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರಿಗೆ ಹಂಚಿಕೊಂಡಿದ್ದಾರೆ. ಆದರೆ ಅದಕ್ಕೂ ಮುನ್ನ ಲೋನ್ ಆ್ಯಪ್ನವರ ಬ್ಲಾಕ್ ಮೇಲ್ ತಡೆಯಲಾಗದೇ ಆ.30 ರಂದು 30 ಸಾವಿರ ಹಣ ಕಟ್ಟಿದ್ದನು. ಆ.31 ರಂದು ಮಧ್ಯಾಹ್ನ 2 ಗಂಟೆಗೆ ಡೆಡ್ ಲೈನ್ ನೀಡಿದ್ದ ಆ್ಯಪ್ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

You cannot copy content from Baravanige News

Scroll to Top