ಶಿರ್ವ: ಪ್ರತಿಭಾನ್ವಿತ ಕಾಲೇಜು ವಿದ್ಯಾರ್ಥಿನಿ ನಿಧನ

ಶಿರ್ವ, ಸೆ.01: ಇಲ್ಲಿಯ ಆರೋಗ್ಯ ಮಾತಾ ದೇವಾಲಯದ ಬಳಿಯ ಕಾನ್ವೆಂಟ್ ರಸ್ತೆಯ ನಿವಾಸಿ ವಿದ್ಯಾರ್ಥಿನಿ ರಿಯಾನ್ನ ಜೇನ್ ಡಿಸೋಜಾ ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದರು.

20ರ ಹರೆಯದ ರಿಯಾನ್ನ ಜೇನ್ ಡಿಸೋಜಾ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಕಳೆದ ವರ್ಷ ಕ್ಯಾನ್ಸರ್ ರೋಗಕ್ಕೆ ಒಳಗಾಗಿದ್ದಳು. ಮಣಿಪಾಲ ಮತ್ತು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು ಚಿಕಿತ್ಸೆ ಫಲಕರಿಯಾಗದೆ ಇಂದು ನಿಧನ ಹೊಂದಿದ್ದಾರೆ.

ಅತ್ಯುತ್ತಮ ಕಾರ್ಯಕ್ರಮ ಸಂಘಟಕಿಯಾಗಿದ್ದ ಇವರು, ವಿದ್ಯಾಭ್ಯಾಸದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದರು. ಅತ್ಯುತ್ತಮ ನೃತ್ಯಪಟುವಾಗಿದ್ದ ಇವರು, ಹಲವಾರು ನೃತ್ಯಗಳಿಗೆ ಕೊರಿಯೋಗ್ರಾಫರ್ ಆಗಿ ಸೇವೆಯನ್ನು ನೀಡಿದ್ದಾರೆ. ಸ್ನೇಹಮಯಿ ವಿದ್ಯಾರ್ಥಿನಿಯಾಗಿದ್ದ ಇವರು ಸೈಂಟ್ ಮೇರಿಸ್ ವಿದ್ಯಾಸಂಸ್ಥೆ ಮತ್ತು ನಿಟ್ಟೆಯಲ್ಲಿ ವಿದ್ಯಾಭ್ಯಾಸವನ್ನು ಪಡೆದಿದ್ದರು.

ಬಿಕಾಂ ಮುಗಿಸಿ ಮಣಿಪಾಲದಲ್ಲಿ ಎಂಕಾಂ ವಿದ್ಯಾಭ್ಯಾಸ ಆರಂಭಿಸುವಷ್ಟರಲ್ಲಿ ಕ್ಯಾನ್ಸರ್ ಗೆ ಒಳಗಾಗಿದ್ದರು.

ವೈಸಿಎಸ್, ಐಸಿವೈಎಂ ಸದಸ್ಯೆಯಾಗಿದ್ದ ಇವರು ತಾಯಿ, ಸಹೋದರ ಮತ್ತು ಅಪಾರ ಸ್ನೇಹಿತರು ಮತ್ತು ಬಂಧು ಬಳಗದವರನ್ನು ಆಗಲಿದ್ದಾರೆ.

You cannot copy content from Baravanige News

Scroll to Top