ಉಡುಪಿ, ಸೆ. 01: ಬೋಟ್ ನಲ್ಲಿ ಮೀನು ಖಾಲಿ ಮಾಡಲು ಇಳಿದಿದ್ದ ಕಾರ್ಮಿಕರಿಬ್ಬರು ಬೋಟ್ ನ ಸ್ಟೋರೇಜ್ ನಲ್ಲಿ ತುಂಬಿದ್ದ ವಿಷಗಾಳಿಯಿಂದಾಗಿ ಅಸ್ವಸ್ಥರಾದ ಘಟನೆ ಶುಕ್ರವಾರ ಸಂಜೆ ಮಲ್ಪೆ ಬಂದರಿನಲ್ಲಿ ನಡೆದಿದೆ.
ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೋಗಿದ್ದ ಬೋಟ್ ನ ಸ್ಟೋರೇಜ್ ನಿಂದ ಮೀನು ಖಾಲಿ ಮಾಡಲು ಒಡಿಸ್ಸಾ ಮೂಲದ ಕಾರ್ಮಿಕರಾದ ರಾಜು ಮತ್ತು ಜಯ ಎಂಬವರು ಇಳಿದಿದ್ದು, ಈ ಸಂಧರ್ಭದಲ್ಲಿ ಸ್ಟೋರೇಜ್ ನ ಒಳಗಡೆ ಮೀನು ಗ್ಯಾಸ್ ಆಗಿ ವಿಷಗಾಳಿ ತುಂಬಿದ್ದು ಇದರಿಂದಾಗಿ ಕಾರ್ಮಿಕರಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು.
ಘಟನೆ ಗಮನಕ್ಕೆ ಬಂದ ತಕ್ಷಣ ಸ್ಥಳೀಯ ಮೀನುಗಾರರು ಮತ್ತು ಸಮಾಜ ಸೇವಕರಾದ ಈಶ್ವರ್ ಮಲ್ಪೆ ಯವರು ಕಾರ್ಮಿಕರನ್ನು ಬೋಟ್ ನಿಂದ ಹೊರಗೆ ತೆಗೆದು, ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆಯಾಗಿ ಸಿಪಿಆರ್ ನೀಡಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರು ಕಾರ್ಮಿಕರು ಕೂಡಾ ಅಪಾಯದಿಂದ ಪಾರಾಗಿದ್ದಾರೆ.