ಬೈಂದೂರು, ಸೆ.04: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಉಪ್ಪುಂದ, ದೈವಜ್ಞ ಬ್ರಾಹ್ಮಣ ಸಂಘ (ರಿ) ಬೈಂದೂರು ತಾಲೂಕು, ಕೇಸರಿ ದಳ ಬೈಂದೂರು ತಾಲೂಕು, ಶ್ರೀ ನಂದಿಕೇಶ್ವರ ಯುವಕ ಮಂಡಳಿ (ರಿ) ಬಿಜೂರು ದೇವಾಡಿಗರ ಸಂಘ (ರಿ)ಉಪ್ಪುಂದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಬೈಂದೂರು ತಾಲೂಕು ಘಟಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಕ್ತನಿಧಿ ಕೇಂದ್ರ ಕುಂದಾಪುರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಥಬೀದಿ ಉಪ್ಪುಂದದಲ್ಲಿ ನೆಡೆಯಿತು.
ಶಾಸಕ ಗುರುರಾಜ್ ಗಂಟಿಹೊಳೆ ರಕ್ತದಾನ ಮಾಡುವುದರೊಂದಿಗೆ ಎಲ್ಲರಿಗೂ ಮಾದರಿಯಾಗಿ ಪ್ರೋತ್ಸಾಹ ನೀಡಿದರು. ಸಂದರ್ಭದಲ್ಲಿ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಯು ಸಂದೇಶ ಭಟ್, ಶಾಸಕರಿಗೆ ವಿಶೇಷವಾದ ಶಾಸಕರ ಭಾವಚಿತ್ರ ಇರುವ ಸುವರ್ಣ ಮಹೋತ್ಸವ ಸಂಭ್ರಮದ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು.