ಜೈಲರ್ ಚಿತ್ರದಲ್ಲಿ ನಟಿಸಿದ್ದ ‘ಪನ್ನೀರ್’ ಇನ್ನಿಲ್ಲ.. ಡಬ್ಬಿಂಗ್ ಮಾಡುವ ವೇಳೆ ಖ್ಯಾತ ನಟನಿಗೆ ಹೃದಯಾಘಾತ

ಬೆಂಗಳೂರು : ಜೈಲರ್ ಸಿನಿಮಾದಲ್ಲಿ ನಟಿಸಿದ್ದ ಖ್ಯಾತ ನಟ ಜಿ ಮಾರಿಮುತ್ತು ಹೃದಯಘಾತದಿಂದ ಮೃತಪಟ್ಟಿದ್ದಾರೆ.

56 ವರ್ಷದ ನಟ ಮಾರಿಮುತ್ತು ಅವರು ಹಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದರು.

ಇತ್ತೀಚೆಗೆ ಬಿಡುಗಡೆಯಾದ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಚಿತ್ರದಲ್ಲಿ ಖಳನಾಯಕ ವರ್ಮನ್ ಸಹಚರ ‘ಪನ್ನೀರ್’ ಪಾತ್ರದಲ್ಲಿ ಅಭಿನಯಿಸಿದ್ದರು.

ಈ ಚಿತ್ರವು ನಟ ಮಾರಿಮುತ್ತುಗೆ ದೊಡ್ಡ ಖ್ಯಾತಿ ತಂದುಕೊಟ್ಟಿತ್ತು. ಮಾರಿಮುತ್ತು ನಿರ್ದೇಶಕ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

ಇನ್ನು ಚಿತ್ರಕ್ಕೆ ಡಬ್ಬಿಂಗ್ ಮಾಡುತ್ತಿದ್ದ ವೇಳೆ ನಟ ಜಿ ಮಾರಿಮುತ್ತು ಅವರಿಗೆ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಟ ಮಾರಿಮುತ್ತು ಮೃತಪಟ್ಟಿದ್ದಾರೆ.

You cannot copy content from Baravanige News

Scroll to Top