ಮುಂಬೈ : ಏರ್ ಇಂಡಿಯಾದ ಟ್ರೇನಿ ಗಗನಸಖಿ ರೂಪಾಲ್ ಓಗ್ರೆ ರವರ ಹತ್ಯೆ ಕೇಸ್ನಲ್ಲಿ ಬಂಧಿತನಾಗಿದ್ದ ಆರೋಪಿಯು ಮುಂಬೈಯ ಅಂಧೇರಿ ಪೊಲೀಸ್ ಠಾಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾನೆ.
ಇನ್ನು ಪೊಲೀಸ್ ಕಸ್ಟಡಿಯಲ್ಲೇ ಆರೋಪಿ ಮೃತ ಪಟ್ಟಿರುವುದು ಕೆಲ ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ ಎಂದು ಹೇಳಲಾಗಿದೆ.
ಆರೋಪಿ ವಿಕ್ರಮ್ ಅಥ್ವಾಲ್ (40) ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ವ್ಯಕ್ತಿ.
ಆರೋಪಿಯು ಪೊಲೀಸ್ ಠಾಣೆಯ ಶೌಚಾಲಯದಲ್ಲಿ ಪ್ಯಾಂಟ್ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾನೆ. ಈತನಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದಾರೆ ಎಂದು ಹೇಳಲಾಗುತ್ತಿದೆ.
ರೂಪಾಲ್ ಓಗ್ರೆ ವಾಸಿಸುತ್ತಿದ್ದ ಐಷಾರಾಮಿ ಫ್ಲ್ಯಾಟ್ನಲ್ಲಿ ಕಳೆದ ಒಂದು ವರ್ಷದಿಂದ ಮೃತ ಆರೋಪಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದನು. ರೂಪಾಲ್ ಹತ್ಯೆಯ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಪೊಲೀಸರು ಕೋರ್ಟ್ಗೆ ಹಾಜರು ಪಡಿಸಿದ್ದರು. ಬಳಿಕ ನ್ಯಾಯಾಲಯ ಸೆಪ್ಟೆಂಬರ್ 8ರ ವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಿತ್ತು. ಆದ್ರೆ ಆರೋಪಿಯು ಠಾಣೆಯ ಶೌಚಾಲಯದಲ್ಲಿಯೇ ನೇಣು ಬಿಗಿದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಇನ್ನು ಪೊಲೀಸರ ತನಿಖೆ ವೇಳೆ ಆರೋಪಿಯು ಚಾಕುವಿನಿಂದ ಗಗನಸಖಿಯ ಕತ್ತು ಸೀಳಿದ್ದನು. ಈ ಸಂಬಂಧ ಚಾಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದರು ಎಂದು ಹೇಳಲಾಗಿದೆ.
ಭಾನುವಾರ ತಡರಾತ್ರಿ ಅಂಧೇರಿಯ ಮರೋಲ್ ಪ್ರದೇಶದ ಬಾಡಿಗೆ ಫ್ಲಾಟ್‌ನಲ್ಲಿ ರೂಪಲ್ ಓಗ್ರೆ ಕುತ್ತಿಗೆ ಸೀಳಿ ಶವವಾಗಿ ಪತ್ತೆಯಾಗಿದ್ದರು. ಇವರು ಮೂಲತಹ ಛತ್ತೀಸ್‌ಗಢದವರಾಗಿದ್ದು ಕಳೆದ ಏಪ್ರಿಲ್‌ನಲ್ಲಿ ಏರ್ಲೈನ್ನಲ್ಲಿ ತರಬೇತಿ ಪಡೆಯಲೆಂದು ಮುಂಬೈಗೆ ಬಂದಿದ್ದರು.