ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆ

ಬೆಂಗಳೂರು : ಮದುವೆಯಾಗಿ ಮೂರು ತಿಂಗಳ ಅಂತರದಲ್ಲೇ ನವವಿವಾಹಿತೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ‌. ನಿನ್ನೆ ರಾತ್ರಿ ಗೃಹಿಣಿ ಕೃಷ್ಣವೇಣಿ ಸಾವನ್ನಪ್ಪಿದ್ದು, ಇಂದು ಬೆಳಗ್ಗೆ ವಿಚಾರ ಗೊತ್ತಾಗುತ್ತಿದ್ದಂತೆ ಕಾಡುಗೋಡಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




ಮೂಲತಃ ಮೈಸೂರಿನ ಸಾಲಿಗ್ರಾಮದ ಕೃಷ್ಣವೇಣಿಯು ಮೂರು ತಿಂಗಳ ಹಿಂದಷ್ಟೇ ಬೆಂಗಳೂರಿನ ಕುಂಬೇನ ಅಗ್ರಹಾರ ಮೂಲದ ಪೃಥ್ವಿರಾಜ್ ಎಂಬುವರೊಂದಿಗೆ ವಿವಾಹವಾಗಿತ್ತು.

ಖಾಸಗಿ ಕಂಪೆನಿಯೊಂದರಲ್ಲಿ ಪೃಥ್ವಿರಾಜ್ ಕೆಲಸ ಮಾಡಿಕೊಂಡಿದ್ದರೆ ಕೃಷ್ಣವೇಣಿ ಗೃಹಿಣಿಯಾಗಿದ್ದರು. ದಂಪತಿಯು ಕಾಡುಗೋಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ನಿನ್ನೆ ಮನೆಯಲ್ಲಿ ಯಾರೂ ಇಲ್ಲದಿರುವಾಗ ಕೃಷ್ಣವೇಣಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಶರಣಾಗಿದ್ದಾಳೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತಳ‌ ಪೋಷಕರು ತನ್ನ ಮಗಳ ಸಾವಿಗೆ ಅಳಿಯನೇ ಕಾರಣ ಎಂದು ಆರೋಪಿಸಿ ದೂರು ನೀಡಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ವೈದೇಹಿ ಆಸ್ಪತ್ತೆಗೆ ರವಾನಿಸಿ ತನಿಖೆ ಕೈಗೊಂಡಿದ್ದಾರೆ.

You cannot copy content from Baravanige News

Scroll to Top