Iphone 15 ರಿಲೀಸ್.. ಬೆಲೆ ಎಷ್ಟಿದೆ.!?? ಫೀಚರ್ ಹೇಗಿದೆ.??

ಜನಪ್ರಿಯ ಕಂಪನಿ ಆ್ಯಪಲ್ ಬಹುನಿರೀಕ್ಷಿತ ಐಫೋನ್ 15 ಸರಣಿಯನ್ನು ಪರಿಚಯಿಸಿದೆ. ಕ್ಯಾಲಿಪೋರ್ನಿಯಾದ ಕ್ಯುಪರ್ಟಿನೊದಲ್ಲಿ ನಡೆದ ವಂಡರ್ಲಸ್ಟ್ ಈವೆಂಟ್ನಲ್ಲಿ ನೂತನ ಐಫೋನ್ ಅನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ಹೊಸ ಆ್ಯಪಲ್ ವಾಚ್ ಅನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರ ಮುಂದಿರಿಸಿದೆ.

ಆ್ಯಪಲ್ ಐಫೋನ್ 15 ಟೆಕ್ಸ್ಟೆಡ್ ಮ್ಯಾಟ್ ಫಿನಿಶ್ ಮತ್ತು ಅಲ್ಯುಮಿನಿಯಂ ಫ್ರೇಮ್ನೊಂದಿಗೆ ಪರಿಚಯಿಸಿದೆ. ಇದರಲ್ಲಿ ಡೈನಾಮಿಕ್ ಐಲ್ಯಾಂಡ್ ಮತ್ತು ಅಲ್ಟ್ರಾ ಹೈ-ರೆಸಲ್ಯೂಶನ್ ಫೋಟೋಗಳಿಗಾಗಿ 48 ಮೆಗಾಫಿಕ್ಸೆಲ್ ಮುಖ್ಯ ಕ್ಯಾಮೆರಾ, ಆಪ್ಟಿಕಲ್ ಜ್ಯೂಮ್ಗಾಗಿ ಹೊಸ 2ಎಕ್ಸ್ ಟೆಲಿಫೋಟೋ ಕ್ಯಾಮರಾ ಒಳಗೊಂಡಿದೆ. ಐಫೋನ್ 15 ಸೆಪ್ಟೆಂಬರ್ 22 ರಂದು ಗ್ರಾಹಕರ ಖರೀದಿಗೆ ಸಿಗಲಿದೆ.

https://x.com/tim_cook/status/1701664311779713306?s=20

ಭಾರತದಲ್ಲಿ iPhone 15 ಬೆಲೆ ಬಗ್ಗೆ ಗಮನಿಸುವುದಾದರೆ..

ಐಫೋನ್ 15
– 128GB: ₹79,900
– 256GB: ₹89,900
– 512GB: ₹1,09,900

ಐಫೋನ್ 15 ಪ್ಲಸ್
– 128GB: ₹89,900
– 256GB: ₹99,900
– 512GB: ₹1,19,900

ಐಫೋನ್ 15 ಪ್ರೊ
– 128GB: ₹1,34,900
– 256GB: ₹1,44,900
– 512GB: ₹1,64,900
– 1TB: ₹1,84,900

ಐಫೋನ್ 15 ಪ್ರೊ ಮ್ಯಾಕ್ಸ್
– 256GB: ₹1,59,900
– 512GB: ₹1,79,900
– 1TB: ₹1,99,900

You cannot copy content from Baravanige News

Scroll to Top