ಬಾಲಿವುಡ್‌ಗೆ ಸಾಯಿ ಪಲ್ಲವಿ; ಸ್ಟಾರ್‌ ನಟನ ಪುತ್ರನಿಗೆ ‘ಫಿದಾ’ ಬ್ಯೂಟಿ ನಾಯಕಿ

ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್, ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಸೋಲಿನ ಬಳಿಕ ನಟನೆಯಿಂದ ಬ್ರೇಕ್ ತೆಗೆದುಕೊಂಡಿರೋ ಬೆನ್ನಲ್ಲೇ ಆಮೀರ್ ಮಗನ ಚೊಚ್ಚಲ ಸಿನಿಮಾ ಬಗ್ಗೆ ಸಖತ್ ಚರ್ಚೆಯಾಗುತ್ತಿದೆ. ಜುನೈದ್ ಖಾನ್ ಮೊದಲ ಸಿನಿಮಾಗೆ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಜುನೈದ್ ಮೊದಲ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿಯಾಗಿ ಫೈನಲ್ ಆಗಿದ್ದಾರೆ.

ಕಳೆದ 2-3 ವರ್ಷಗಳಿಂದ ಜುನೈದ್ ಖಾನ್ ಲಾಂಚ್ ಬಗ್ಗೆ ಕೇಳಿ ಬರುತ್ತಿದೆ. ಅದರಲ್ಲೂ ಆಮೀರ್ ಖಾನ್ ನಟನೆಯಿಂದ ಬ್ರೇಕ್ ತೆಗೆದುಕೊಂಡ ಬಳಿಕ ಜುನೈದ್ ಸಿನಿಮಾ ಬಗ್ಗೆ ಹೆಚ್ಚೆಚ್ಚು ಟಾಕ್ ಆಗುತ್ತಿದೆ. ಆಮೀರ್ ಪುತ್ರನ ಮೊದಲ ಚಿತ್ರಕ್ಕೆ ಯಶ್ ರಾಜ್ ಫಿಲ್ಮ್ಸ್‌ ನಿರ್ಮಾಣ ಮಾಡುತ್ತಿದೆ.

ಈ ಹಿಂದೆ ಜುನೈದ್ ಖಾನ್ ನಾಯಕಿಯಾಗಿ ಶ್ರೀದೇವಿ- ಭೋನಿ ಕಪೂರ್ ಪುತ್ರಿ ಖುಷಿ ಎನ್ನಲಾಗಿತ್ತು. ಆದರೆ ಈ ಬೇರೆಯದ್ದೇ ಸುದ್ದಿ ಹರಿದಾಡುತ್ತಿದೆ. ಸಾಯಿ ಪಲ್ಲವಿ ಲೀಡಿಂಗ್ ಲೇಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ವಿಭಿನ್ನ ಲವ್ ಸ್ಟೋರಿಗೆ ಜುನೈದ್- ಸಾಯಿ ಪಲ್ಲವಿ ಜೋಡಿಯಾಗಿ ಬರುತ್ತಿದ್ದು, ಸುನೀಲ್ ಪಾಂಡೆ ನಿರ್ದೇಶನ ಮಾಡುತ್ತಿದ್ದಾರೆ. ಆದರೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ಜುನೈದ್ ಖಾನ್‌ಗೆ ರಂಗಭೂಮಿಯಲ್ಲಿ ನಟಿಸಿದ ಅನುಭವಿದೆ. ಸಾಕಷ್ಟು ನಾಟಕ ಪ್ರದರ್ಶನಗಳನ್ನ ಅವರು ನೀಡಿದ್ದಾರೆ. ‘ಪಿಕೆ’ (Pk) ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಅನುಭವವಿದೆ.

You cannot copy content from Baravanige News

Scroll to Top