ಬೆಂಗಳೂರು : ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಸೇರಿ 7 ಮಂದಿ ಆರೋಪಿಗಳ ನ್ಯಾಯಾಂಗ ಬಂಧನವನ್ನುಅಕ್ಟೊಬರ್ 6 ರವರೆಗೆ ಬೆಂಗಳೂರಿನ 3 ನೇ ಎಪಿಎಂಸಿ ನ್ಯಾಯಾಲಯ ವಿಸ್ತರಿಸಿದೆ.
ಪ್ರಮುಖ ಆರೋಪಿ ಚೈತ್ರಾ ಅವರೊಂದಿಗೆ ಇತರ ಆರೋಪಿಗಳಾದ ಅಭಿನವ ಹಾಲಶ್ರೀ, ಶ್ರೀಕಾಂತ್, ಗಗನ್, ರಮೇಶ್, ಪ್ರಜ್ವಲ್ ಮತ್ತು ಧನರಾಜ್ ಸಹಿತ 7 ಮಂದಿ ಆರೋಪಿಗಳನ್ನು ಸೆಪ್ಟೆಂಬರ್ 13 ರಂದು ನ್ಯಾಯಾಲಯ 10 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇಂದು ಪೊಲೀಸ್ ಕಸ್ಟಡಿ ಅಂತ್ಯಗೊಂಡ ಕಾರಣ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಯಿತು.
ಇನ್ನು ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಚೈತ್ರಾ ಮತ್ತು ಇತರ ಎಂಟು ಮಂದಿ ವಿರುದ್ಧ ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.
ವಂಚನೆ ಪ್ರಕರಣ : ಚೈತ್ರಾ ಸೇರಿ 7 ಮಂದಿಗೆ ಅ. 6ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ
