ಕಾಪು ರೈತ ಉತ್ಪಾದಕ‌ ಕಂಪನಿ ನಿ. ಶಿರ್ವ ಇದರ ವಾರ್ಷಿಕ‌ ಮಹಾಸಭೆ

ಕಾಪು ರೈತ ಉತ್ಪಾದಕ‌ ಕಂಪನಿ ನಿ. ಶಿರ್ವ ಇದರ ವಾರ್ಷಿಕ‌ ಮಹಾಸಭೆಯು ದಿನಾಂಕ 27-09-2023 ಅಪರಾಹ್ನ 3ಗಂಟೆಗೆ ಸಂಸ್ಥೆಯ ಅಧ್ಯಕ್ಷರು ಶ್ರೀಮತಿ ಲಿಲ್ಲಿ ಆರ್. ಡಿಸೋಜ ಇವರ ಅಧ್ಯಕ್ಷತೆಯಲ್ಲಿ ಶಿರ್ವ ಮಹಿಳಾ ಸೌಧದಲ್ಲಿ ನಡೆಯಿತು.

ಅತಿಥಿಗಳಾಗಿ ಅಟಲ್ ಇಂಕ್ಯೂಬೇಷನ್ ಸೆಂಟರ್ ನಿಟ್ಟೆ ಇದರ ಪೈನಾನ್ಸ್ ಮ್ಯಾನೇಜರ್ ಕು.ದೀಕ್ಷಾ ರೈ ನಿಟ್ಟೆ ಮತ್ತು PMFME ಯೋಜನೆಯ ಉಡುಪಿ ಜಿಲ್ಲೆಯ ಸಂಪನ್ಮೂಲ ವ್ಯಕ್ತಿಗಳಾಗಿ ವೆಂಕಟೇಶ್ ನಾಯಕ್ ಭಾಗವಹಿಸಿದರು.


ಸಂಸ್ಥೆಯ ಗೌರವ ಸಲಹೆಗಾರ ಸಂಪದ ಉಡುಪಿ ಇದರ ನಿರ್ದೇಶಕರು ಪಾ. ರೆಜಿನಾಲ್ಡ್ ಪಿಂಟೊ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯಲ್ಲಿ ಸದಸ್ಯರ ಉತ್ತಮ ಆರೋಗ್ಯವನ್ನು ಗಮನದಲ್ಲಿ ಇಟ್ಟು ಸಾವಯವ ಅಡುಗೆ ಸಾಮಗ್ರಿಗಳನ್ನು ಸಂಸ್ಥೆಯಲ್ಲಿಯೇ PMFME ಯೋಜನೆಯ ಮೂಲಕ ಸಂಸ್ಕರಿಸಿ ಮಾರಟವನ್ನು ಮಾಡಿ ಆ ಮೂಲಕ ಸ್ಥಳಿಯವಾಗಿ ರೈತ ಮಹಿಳೆಯರಿಗೆ ಉದ್ಯೋಗವಕಾಶ ಒದಗಿಸಲಾಗುವುದು ಎಂದರು.


AIC ನಿಟ್ಟೆ ಇದರ ಹಣಕಾಸು ಮ್ಯಾನೇಜರ್ ಕು. ದೀಕ್ಷಾ ರೈ ಮಾತನಾಡಿ ಕಾಪು ರೈತ ಉತ್ಪಾದಕ‌ ಕಂಪನಿಯು ರಾಜ್ಯದಲ್ಲೇ ಮೊದಲ ಬಾರಿಗೆ ಮಹಿಳೆಯರೇ ಸದಸ್ಯರಾಗಿರುವ ಕಂಪನಿಯಾಗಿದ್ದು ಮುಂಬರುವ ದಿನಗಳಲ್ಲಿ ಕಂಪನಿಯು ಇನ್ನಷ್ಟು ಅಭಿವ್ರದ್ದಿ ಸಾಧಿಸಬೇಕು ಎಂದರು.


PMFME ಯೋಜನೆಯ ಉಡುಪಿ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಶ್ರೀ ವೆಂಕಟೇಶ ನಾಯ್ಕ್ PMFME ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.


ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೋನ್ ಡಿಸೋಜ ಕಾರ್ಯಕ್ರಮ ನಿರೂಪಿಸಿ ವರದಿ ವಾಚನ‌ ಮಾಡಿದರು. ಅಕೌಂಟೆಂಟ್ ಕು. ಶರಣ್ಯ ವಂದಿಸಿದರು.

Scroll to Top