ಮಗಳ ಮದುವೆಗೆಂದು ಕೂಡಿಟ್ಟ 18 ಲಕ್ಷ ರೂ. ಗೆದ್ದಲು ಪಾಲು…!!

ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ತಾಯಿಯೊಬ್ಬಳು ಮಗಳ ಮದುವೆಗೆಂದು ಜೋಪಾನವಾಗಿ ಕೂಡಿಟ್ಟ 18 ಲಕ್ಷ ರೂ. ಹಣವು ಬ್ಯಾಂಕ್‌ನ ಲಾಕರ್‌ನಲ್ಲಿ ಗೆದ್ದಲು ಹಿಡಿದು ನಾಶವಾಗಿರುವ ಘಟನೆ ವರದಿಯಾಗಿದೆ.

ಅಲ್ಕಾ ಪಠಾಕ್‌ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬ್ಯಾಂಕ್‌ವೊಂದರಲ್ಲಿ 18 ಲಕ್ಷ ರೂ.ಗಳನ್ನು ಇಟ್ಟಿದ್ದರು. ಇತ್ತೀಚಿಗೆ ಬ್ಯಾಂಕ್‌ ಸಿಬಂದಿ ಲಾಕರ್‌ ಅಗ್ರಿಮೆಂಟ್‌ ರಿನೀವಲ್‌ಗೆ ಎಂದು ಅಲ್ಕಾ ಅವರಿಗೆ ಕರೆ ಮಾಡಿ ಬರಲು ಹೇಳಿದ್ದಾರೆ. ಈ ವೇಳೆ ಲಾಕರ್‌ ತೆರೆದರೆ ನೋಟುಗಳಿಗೆ ಗೆದ್ದಲು ಹಿಡಿದಿರುವುದು ಗೊತ್ತಾಯಿತು.

ಇನ್ನು ಈ ಬಗ್ಗೆ ಬ್ಯಾಂಕ್‌ನ ಮುಖ್ಯ ಕಚೇರಿಗೆ ತಿಳಿಸಿರುವುದಾಗಿ ಸಿಬಂದಿ ಹೇಳಿದ್ದು, ತನಗಾದ ನಷ್ಟಕ್ಕೆ ಬ್ಯಾಂಕ್‌ನವರೇ ಪರಿಹಾರ ನೀಡಬೇಕೆಂದು ಮಹಿಳೆ ಆಗ್ರಹಿಸಿದ್ದಾರೆ.

You cannot copy content from Baravanige News

Scroll to Top