ಮಂಗಳೂರು ಮೀನುಗಾರರ ಬಲೆಗೆ ಬಿತ್ತು ‘ರಕ್ಕಸ’ ಗಾತ್ರದ ‘ಮುರು’ ಮೀನು

ಮಂಗಳೂರು, ಸೆ.29: ಉಳ್ಳಾಲದಲ್ಲಿ ಗುರುವಾರ 75 ಕೆಜಿಯ ತೂಕದ ಬೃಹತ್ ಪಿಲಿ ತೊರಕೆ ಮೀನು ಬಲೆಗೆ ಬಿದ್ದ ಬೆನ್ನಿಗೆ ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದೆ.

ಬರೋಬ್ಬರಿ 300 ಕೆ.ಜಿ. ತೂಕದ ಬೃಹತ್ ಮುರು ಜಾತಿಯ ಮೀನೊಂದು ಮಂಗಳೂರಿನ ಮೀನುಗಾರರ ಬಲೆಗೆ ಬಿದ್ದಿದೆ,

ಮಂಗಳೂರು ಮೀನುಗಾರಿಕಾ ದಕ್ಕೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ಹೋಗಿದ್ದ ಮಂಗಳೂರಿನ ಮೀನುಗಾರರ ಬಲೆಗೆ ಈ ಬೃಹತ್ ಗಾತ್ರದ ಮುರು ಮೀನು ಸಿಕ್ಕಿದ್ದು, ಇದೀಗ ಇದರ ವೀಡಿಯೋ ಭಾರೀ ವೈರಲ್ ಆಗುತ್ತಿದೆ.

ಬರೋಬ್ಬರಿ 300 ಕೆ.ಜಿ.ಯಷ್ಟು ತೂಕವಿರುವ ಈ ಮುರು ಮೀನನ್ನು ಐದಾರು ಮಂದಿ ಮೀನುಗಾರರು ಎತ್ತಲು ಹರಸಾಹಸ ಪಡುವುದು ದೃಶ್ಯದಲ್ಲಿ ಕಂಡುಬಂದಿದೆ.

ಸಾಮಾನ್ಯ ಸಣ್ಣ ಗಾತ್ರದ ಮುರು ಮೀನು ಎಲ್ಲೆಡೆ ನೋಡಲು ಸಿಗುತ್ತಿದೆ ಆದ್ರೂ ಇಷ್ಟೊಂದು ದೊಡ್ಡ ಗಾತ್ರದ ಮುರು ಮೀನು ಇದೇ ಮೊದಲ ಬಾರಿ ಮೀನುಗಾರರ ಬಲೆಗೆ ಬಿದ್ದಿದ್ದು. ಕೆ.ಜಿ.ಗೆ 200 ರೂಪಾಯಿಯಂತೆ ಮಾರಾಟವಾಗಿದೆ ಎಂದು ಮೀನುಗಾರರೊಬ್ಬರು ಮಾಹಿತಿ ನೀಡಿದ್ದಾರೆ.

Scroll to Top