ಕುತ್ಯಾರು : ಹುಚ್ಚುನಾಯಿ ಹಾವಳಿ : ಸಾಕು ನಾಯಿಗಳನ್ನು ಕಟ್ಟಿ ಹಾಕುವಂತೆ, ಮುಂಜಾಗ್ರತ ಕ್ರಮಕೈಗೊಳ್ಳುವಂತೆ ಪಂಚಾಯತ್ ಮನವಿ

ಉಡುಪಿ : ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹುಚ್ಚುನಾಯಿ ಸಂಚರಿಸುತ್ತಿದ್ದು, ಕೆಲವು ನಾಯಿಗಳಿಗೆ ಕಚ್ಚಿದ್ದು ಗ್ರಾಮದಲ್ಲಿ ತುಂಬಾ ಆತಂಕವನ್ನು ಮೂಡಿಸಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಮನೆಯ ಸಾಕು ನಾಯಿಗಳನ್ನು ಕಡ್ಡಾಯವಾಗಿ ಮನೆಯಲ್ಲಿ ಕಟ್ಟಿ ಹಾಕಿ ಹಾಗೂ ಕಡ್ಡಾಯವಾಗಿ ರೇಬಿಸ್ ಇಂಜೆಕ್ಷನ್ ಅನ್ನು ತಕ್ಷಣವೇ ನೀಡಬೇಕಾಗಿ ಕುತ್ಯಾರು ಗ್ರಾಮ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನು ನಿರ್ಲಕ್ಷಿಸಿದರೆ ಹಾಗೂ ನಾಯಿಯನ್ನು ಹೊರಗೆ ಬಿಟ್ಟಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You cannot copy content from Baravanige News

Scroll to Top