ಕಳ್ಳ ಹೆಂಗೇ ಪರಾರಿಯಾದರೂ ಒಂದೆಲ್ಲ ಒಂದು ದಿನ ಸಿಕ್ಕಿಬಿದ್ದೇ ಬೀಳ್ತಾನೆ. ಕಳ್ಳ ಯಾವತ್ತಿದ್ದರೂ ಕಳ್ಳನೇ.. ಒಂದಿನ ಎಲ್ಲವೂ ಆಚೆ ಬಂದೇ ಬರುತ್ತದೆ ಅನ್ನೋದು ಲೋಕರೂಢಿ! ಈ ಮಾತು ಮತ್ತೊಮ್ಮೆ ಸಾಬೀತಾಗಿದೆ.
ಕಿಲಾಡಿ ಕಳ್ಳನೊಬ್ಬ ಜ್ಯೋತಿಷಿ ಮನೆಯಲ್ಲಿ ಲಕ್ಷ ಲಕ್ಷ ಕದ್ದು ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಆದರೆ ಆತ ಹೆಂಗೆ ಸಿಕ್ಕಿಬಿದ್ದಿದ್ದಾನೆ ಅನ್ನೋದೇ ಇಂಟ್ರೆಸ್ಟಿಂಗ್ !!
ಇತ್ತೀಚೆಗೆ ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಜ್ಯೋತಿಷಿ ಒಬ್ಬರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ಜ್ಯೋತಿಷಿ ಪೊಲೀಸರಿಗೆ ದೂರು ನೀಡಿದ್ದರು.
ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಆರಂಭಿಸಿದ್ದರು. ಮನೆಗೆ ಬಂದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದರು. ಸಿಸಿಟಿವಿ ದೃಶ್ಯದಲ್ಲಿ ಕಳ್ಳನ ವಿಡಿಯೋ ಸೆರೆಯಾಗಿತ್ತು. ದುರಾದೃಷ್ಟ ಅಂದರೆ ಪೊಲೀಸರಿಗೆ ಕಳ್ಳ ಆಮೇಲೆ ಎಲ್ಲಿ ಹೋದ ? ಯಾರು ಆತ ಅನ್ನೋದನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.
ಮತ್ತೆ ಹೇಗೆ ಸಿಕ್ಕಿಬಿದ್ದರು..!?
ಕದ್ದ ಕಳ್ಳರಿಗೆ ಒಂದು ಖಯಾಲಿ ಇತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಕೆಲವು ವಿಚಾರಗಳನ್ನು ಆಗಾಗ ಹಂಚಿಕೊಳ್ಳತ್ತಿದ್ದರು. ಲಕ್ಷ ಲಕ್ಷ ಹಣ ಕದ್ದ ಖುಷಿಯಲ್ಲಿದ್ದ ಅವರು, ಅವುಗಳನ್ನು ಫೋಟೋ ತೆಗೆಯಲು ನಿರ್ಧರಿಸಿದ್ದಾರೆ. ಅದರಂತೆ ಒಂದು ಹೋಟೆಲ್ಗೆ ಹೋದ ಅವರು.. ಅಲ್ಲಿರುವ ಬೆಡ್ ಮೇಲೆ ಹಣವನ್ನು ಸುರಿದಿದ್ದಾರೆ. ಮತ್ತೊಬ್ಬ ಐದು ನೂರು ರೂಪಾಯಿ ನೋಟಿನ ಕಂತೆಯನ್ನು ಹಿಡಿದು ಪೋಸ್ ನೀಡಿದ್ದಾರೆ. ಕೊನೆಗೆ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಂತರ ಪೊಲೀಸರ ಕಣ್ಣಿಗೂ ವಿಡಿಯೋ ಬಿದ್ದಿದೆ. ಅನುಮಾನಗೊಂಡ ಪೊಲೀಸರು ವಿಡಿಯೋ ಪರಿಶೀಲನೆ ಮಾಡಿದ್ದಾರೆ. ಕೊನೆಗೆ ಡಿಜಿಟಲ್ ಸಾಕ್ಷಿಗಳ ಮೂಲಕ ಟ್ರ್ಯಾಕ್ ಮಾಡಿ ಓರ್ವ ಆರೋಪಿಯನ್ನು ಬಂಧಿಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ಕದ್ದ ಆರೋಪಿ ಸಿಕ್ಕಿಬಿದ್ದಿದ್ದ., ರೀಲ್ಸ್ ಮಾಡಿದ ಕಳ್ಳರು ಎಸ್ಕೇಪ್ ಆಗಿದ್ದಾರೆ. ಬಂಧಿತ ಆರೋಪಿಗಳಿಂದ 2ಲಕ್ಷೂ ಅಧಿಕ ಹಣ ಹಾಗೂ ಮೊಬೈಲ್ಗಳನ್ನು ಸೀಜ್ ಮಾಡಿದ್ದಾರೆ.