ಬೆಂಗಳೂರು, ಅ.06: ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬರು ಗೋಬಿ ತಿಂದದಕ್ಕೆ ನಮ್ಮ ಮೆಟ್ರೊ 500 ರೂ. ದಂಡ ವಿಧಿಸಿದೆ.
ಬೆಂಗಳೂರಿನ ಜಯನಗರದ ಪ್ರಮುಖ ಆಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೊಬ್ಬರು ಮೆಟ್ರೋ ಒಳಗೆ ಗೋಬಿ ಸೇವಿಸುತ್ತಿರುವ ವಿಡಿಯೊವನ್ನು ಅವರ ಸ್ನೇಹಿತರು ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದರು.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಗೋಬಿ ತಿಂದ ವ್ಯಕ್ತಿ ಮತ್ತು ಅವರ ಸ್ನೇಹಿತರ ವಿರುದ್ಧ ಸಿಎಆರ್ ದಾಖಲಿಸಲಾಗಿದೆ.
ಈ ನಡುವೆ ನಿಯಮ ಉಲ್ಲಂಘಿಸಿದ ಯೂಟ್ಯೂಬರ್ ಗೆ ನಮ್ಮ ಮೆಟ್ರೋ 500 ರೂ. ದಂಡ ವಿಧಿಸಿದೆ. ಅರ್ಧ ದಿನ ಮೂವರನ್ನು ಠಾಣೆಯಲ್ಲಿರಿಸಿ, ಎಚ್ಚರಿಕೆ ನೀಡಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ಹೇಳಿದ್ದಾರೆ.