ಕಾರಿನ ಗಾಜು ಒಡೆದು ಕಳ್ಳತನ ಪ್ರಕರಣ ; ಕಳ್ಳನನ್ನು ಹಿಡಿದ ಸುಬ್ರಹ್ಮಣ್ಯ ಪೊಲೀಸರು

ಸುಬ್ರಹ್ಮಣ್ಯ : ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಕಳ್ಳತನ ಮಾಡಿದ್ದ ಆರೋಪಿಯನ್ನು ತಕ್ಷಣ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಅಧಿಕಾರಿ ಕಾರ್ತಿಕ್ ಹಾಗೂ ಮುರಳಿಧರ ನಾಯಕ್, ಕರುಣಾಕರ ಹಾಗೂ ಸಿಬ್ಬಂಧಿಗಳ ಎರಡು ತಂಡ ರಚಿಸಿ ಆರೋಪಿಯನ್ನು ರೈಲ್ವೆ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಭಾಕರ ಹೊನ್ನವಳ್ಳಿ ಆರೋಪಿಯಾಗಿದ್ದಾನೆ. ಈತನ ಮೇಲೆ ಹೊನ್ನವಳ್ಳಿ ಸೇರಿದಂತೆ ಬೇರೆ ಬೇರೆ ಠಾಣೆಗಳಲ್ಲಿ ಹಲವು ಪ್ರಕರಣಗಳಿದ್ದು ದೇವಸ್ಥಾನ ಗಳಿಗೆ ಹೋಗಿ ಉಪಾಯದಿಂದ ಯಾರು ಇಲ್ಲದ ಸಮಯ ನೋಡಿಕೊಂಡು ಲೋಹದಂತ ಆಯುಧಗಳನ್ನು ಬಳಸಿ ಕಾರಿನ ಗಾಜುಗಳನ್ನು ಪುಡಿ ಮಾಡಿ ಬೇಲೆ ಬಾಳುವ ವಸ್ತುಗಳನ್ನು ಕದಿಯೋ ಚಾಳಿ ಬೆಳೆಸಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ ಕಳವಾಗಿರುವ ಬ್ಯಾಗ್‌ನಲ್ಲಿ ಅಂದಾಜು 14 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್ ಹಾಗೂ ಆಧಾರ ಕಾರ್ಡ್ ,ಎಟಿಎಂ, ಇತ್ತೆದು ಈ ಬಗ್ಗೆ ಕೇರಳ ನಿವಾಸಿ ಸುಯಿಶ್ ಟಿ ಸಿ ಎಂಬವರ ದೂರಿನಲ್ಲಿ ಹೇಳಿದ್ದಾರೆ. ಆರೋಪಿಯನ್ನು ಮಂಗಳೂರು ಜೈಲಿಗೆ ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ದಕ್ಷ ಪೊಲೀಸ್ ಅಧಿಕಾರಿಗಳ ಈ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ.

Scroll to Top