ಮುಂಬೈ : ಅಹಮದಾಬಾದ್ ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ವಿಶ್ವಕಪ್ 2023 ರ ಪಂದ್ಯದ ವೇಳೆ ತನ್ನ 24 ಕ್ಯಾರೆಟ್ ಚಿನ್ನದ ಐಫೋನ್ ಕಳೆದುಹೋಗಿದೆ ಎಂದು ಬಾಲಿವುಡ್ ನಟಿ ಉರ್ವಶಿ ರೌಟೇಲಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸಿಕ್ಕಿದವರು ದಯವಿಟ್ಟು ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ “ನನ್ನ 24 ಕ್ಯಾರೆಟ್ ನಿಜವಾದ ಚಿನ್ನದ ಐ ಫೋನ್ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಳೆದುಹೋಗಿದೆ! ಯಾರಾದರೂ ಅದನ್ನು ಕಂಡರೆ, ದಯವಿಟ್ಟು ಸಹಾಯ ಮಾಡಿ. ದಯವಿಟ್ಟು ನನ್ನನ್ನು ಸಂಪರ್ಕಿಸಿ ಎಂದು ಪೋಸ್ಟ್ ಮಾಡಿದ್ದಾರೆ.
ತಮ್ಮ ಈ ಪೋಸ್ಟ್ ಅನ್ನು ಅಹಮದಾಬಾದ್ ಪೊಲೀಸರಿಗೆ ಹಾಗೂ ನರೇಂದ್ರ ಮೋದಿ ಸ್ಟೇಡಿಯಂನ ಅಧಿಕೃತ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ.
ನಟಿ ಊರ್ವಶಿ ಇದೀಗ ಶೇರ್ ಮಾಡಿರುವ ಪೋಸ್ಟ್ ಕೂಡ ಸಖತ್ ಟ್ರೋಲ್ ಆಗುತ್ತಿದೆ. ಸುದ್ದಿಯಾಗಲು ಸದಾ ಒಂದಲ್ಲಾ ಒಂದು ಗಿಮಿಕ್ ಮಾಡುತ್ತಿರುತ್ತಾರೆ ಎಂದು ನೆಟ್ಟಿಗರು ನಟಿಯ ವಿರುದ್ಧ ಕಿಡಿಕಾರುತ್ತಿದ್ದಾರೆ. ಐಫೋನ್ ಕಳೆದುಕೊಂಡಿದ್ದಾರೆ ಎಂಬ ವಿಚಾರವೇ ಸುಳ್ಳು ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿಯ ಬಗ್ಗೆ ಪರ ವಿರೋಧದ ಚರ್ಚೆ ಕೂಡ ನಡೆಯುತ್ತಿದೆ.