ಇಂದಿನಿಂದ ಮಲ್ಪೆ ಸೈಂಟ್‌ ಮೇರಿ ಐಲ್ಯಾಂಡ್‌ ಬೋಟ್‌ ಯಾನ ಪ್ರಾರಂಭ

ಉಡುಪಿ, ಅ 19: ಉಡುಪಿಯ ಪ್ರಸಿದ್ಧ ಪ್ರವಾಸಿಗರ ಆಕರ್ಷಣೀಯ ತಾಣ ಮಲ್ಪೆಯ ಸೈಂಟ್‌ ಮೇರೀಸ್‌ ದ್ವೀಪ ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ. ಇಲ್ಲಿಗೆ ಪ್ರವಾಸಿ ಬೋಟ್‌ಗಳ ಸಂಚಾರ ಇಂದಿನಿಂದ ಆರಂಭಗೊಂಡಿದ.

ಸೀವಾಕ್‌ ವೇ ಬಳಿ 4 ದೋಣಿಗಳು ಎಲ್ಲ ರೀತಿಯ ಸುರಕ್ಷಾ ಸಮಾಗ್ರಿ ಸಮೇತ ಸಜ್ಜಾಗಿ ಪ್ರವಾಸಿಗರ ಸೇವೆಗೆ ನಿಂತಿವೆ ಎಂದು ಪ್ರವಾಸಿ ಬೋಟ್‌ಗಳ ಮುಖ್ಯಸ್ಥ ಗಣೇಶ್‌ ಮಲ್ಪೆ ತಿಳಿಸಿದ್ದಾರೆ.

ಮಳೆಗಾಲದಲ್ಲಿ ದ್ವೀಪ ಯಾನ ಅಪಾಯಕಾರಿ ಎಂದು ಪ್ರತೀ ವರ್ಷ ಮೇ 15ರಿಂದ ಸೆ. 15ರ ವರೆಗೆ ದ್ವೀಪ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರುತ್ತದೆ. ಈ ಬಾರಿ ಟೆಂಡರ್‌ ಪ್ರಕ್ರಿಯೆಯಿಂದಾಗಿ ಒಂದು ತಿಂಗಳು ವಿಳಂಬಗೊಂಡಿತ್ತು.

ಸೈಂಟ್‌ಮೇರಿ ದ್ವೀಪದ ಪ್ರಾಕೃತಿಕ ಸೌಂದರ್ಯದ ಸೊಬಗು ಸವಿಯಲು ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

You cannot copy content from Baravanige News

Scroll to Top