ಚಿತ್ರದುರ್ಗ, ಅ 20: ಹೊಸ ಮೊಬೈಲ್ ಕೊಡಿಸುವಂತೆ ಯುವಕನೊಬ್ಬ ಅಜ್ಜನ ದುಂಬಾಲು ಬಿದ್ದು, ಬ್ಲ್ಯಾಕ್ ಮೇಲ್ ಗೆ ಮಾಡಲೆಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ 20ರ ಹರೆಯ ಮೊಮ್ಮಗ ದುರಂತ ಅಂತ್ಯ ಕಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೊಳಾಳ್ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಯಶವಂತ್(20) ಎಂದು ಗುರುತಿಸಲಾಗಿದೆ.
ಯಶವಂತ್ ಅ. 8ರಂದು ಮಹಾಗಣಪತಿ ವಿಸರ್ಜನೆ ವೇಳೆ ತನ್ನ ಮೊಬೈಲ್ ಕಳೆದುಕೊಂಡಿದ್ದ. ಕೈಯಲ್ಲಿ ಮೊಬೈಲ್ ಇಲ್ಲದೇ ಚಡಪಡಿಸುತ್ತಿದ್ದ. ಹೀಗಾಗಿ ಹೊಸ ಮೊಬೈಲ್ ಕೊಡಿಸುವಂತೆ ಅಜ್ಜನ ಬಳಿ ಹಠ ಹಿಡಿದಿದ್ದ. ಅಜ್ಜನೂ ಮೊಮ್ಮಗನ ಬೇಡಿಕೆ ಇಡೇರಿಸಲು ಒಪ್ಪಿ ಹೊಸ ಮೊಬೈಲ್ ಕೊಡಿಸುತ್ತೇನೆ. ಆದರೆ ಈರುಳ್ಳಿ ಬೆಳೆ ಬಂದರೆ ಕೈಗೂ ಕಾಸು ಬರುತ್ತದೆ ಎಂದಿದ್ದಾರೆ.
ಆದರೂ ಮೊಬೈಲ್ ತಕ್ಷಣ ಕೊಡಿಸಬೇಕು ಎಂದು ಅಜ್ಜನ ಬ್ಕ್ಯಾಕ್ ಮೇಕ್ ಮಾಡಲು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಯಶವಂತ್ ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.