ನಾಳೆ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ; ನಾಡಹಬ್ಬದ ಮೇಲೂ ಉಗ್ರರ ಕರಿನೆರಳು..??

ಸಾಂಸ್ಕೃತಿಕ ನಗರಿಯಲ್ಲಿ ನಾಡಹಬ್ಬ ದಸರಾದ ಸಂಭ್ರಮ ಮನೆ ಮಾಡಿದೆ. ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದೆ. 414ನೇ ನಾಡಹಬ್ಬದ ಸೊಬಗನ್ನ ಕಣ್ತುಂಬಿಕೊಳ್ಳಲು ಜನಸಾಗರವೇ ಅರಮನೆ ನಗರಿಯತ್ತ ಹರಿದು ಬರ್ತಿದೆ. ಈ ಮಧ್ಯೆ ಜಗತ್ಪ್ರಸಿದ್ಧ ದಸರಾ ಮೇಲೆ ಉಗ್ರರ ಕರಿನೆರಳು ಬಿದ್ದಿರೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಅರಮನೆ ನಗರಿಯಲ್ಲಿ ಪೊಲೀಸ್‌ ಇಲಾಖೆ ಫುಲ್ ಅಲರ್ಟ್ ಆಗಿದೆ.

ಮೈಸೂರು ದಸರಾ ಎಷ್ಟೊಂದು ಸುಂದರ ಎನ್ನುವಂತೆ ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಗೆ ಕೌಂಟ್‌ಡೌನ್ ಶುರುವಾಗಿದೆ.. ಮೈಸೂರಿನ ಬೀದಿಗಳಲ್ಲಿ ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಲು ಅಭಿಮನ್ಯು ಸಜ್ಜಾಗಿದ್ದಾನೆ.. ಜಿಲ್ಲಾಡಳಿತ ಕೂಡಾ ದಸರಾ ವೈಭವಕ್ಕೆ ಸಿದ್ಧತೆ ಮಾಡಿಕೊಳ್ತಿದೆ.. ಈಗಾಗಲೇ ಅರಮನೆ ನಗರಿ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ.. ಈ ಮಧ್ಯೆ ಮೈಸೂರಿನ ವೈಭವದ ಮೇಲೆ ನರಹಂತಕರ ಕಣ್ಣು ಬಿತ್ತಾ ಎಂಬ ಅನುಮಾನ ಹುಟ್ಟಿದೆ.

ನಾಡಹಬ್ಬ ದಸರಾ ಮೇಲೆ ಬಿತ್ತಾ ಉಗ್ರರ ಕರಿನೆರಳು? ಮೈಸೂರಿನಲ್ಲಿ ಪೊಲೀಸ್ ಇಲಾಖೆ ಫುಲ್ ಅಲರ್ಟ್‌!

ಅರಮನೆ ನಗರಿ ಮೈಸೂರಿನಲ್ಲಿ 414ನೇ ನಾಡಹಬ್ಬದ ಸೊಬಗನ್ನ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸ್ತಿದ್ದಾರೆ. ಈಗಾಗಲೇ ಅದೆಷ್ಟೋ ಮಂದಿ ಮೈಸೂರಿನಲ್ಲಿ ಬೀಡುಬಿಟ್ಟಿದ್ದಾರೆ. ಇದೇ ಅಕ್ಟೋಬರ್ 24ರಂದು ವಿಶ್ವವಿಖ್ಯಾತ ಜಂಬೂ ಸವಾರಿ ನಡೆಯಲಿದೆ. ಈ ಸಂಭ್ರಮದ ಚಿನ್ನದ ಅಂಬಾರಿಯಲ್ಲಿ ಚಾಮುಂಡಿ ತಾಯಿ ಆಸೀನಳಾಗುವ ಹೊತ್ತಲ್ಲಿ ಕೇಳಬಾರದ ಸುದ್ದಿಯೊಂದು ಕೇಂದ್ರ ಗುಪ್ತಚರ ಇಲಾಖೆ ಕಿವಿಗೆ ಬಿದ್ದಿದೆ. ಉಗ್ರರು ದಸರಾವನ್ನೇ ಟಾರ್ಗೆಟ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ದಸರಾ ಭದ್ರತೆಯನ್ನ ಡಿಜಿ-ಐಜಿಪಿ ಅಲೋಕ್ ಮೋಹನ್​ ತುರ್ತಾಗಿ ಹೆಚ್ಚಳ ಮಾಡಿದ್ದಾರೆ. ಸುಮಾರು 70 ಮಂದಿ ಅಕ್ರಮವಾಗಿ ದೇಶಕ್ಕೆ ನುಸುಳಿರೋ ಮಾಹಿತಿ ಸಿಕ್ಕಿದ್ದು, ನಕಲಿ ಪಾಸ್​ಪೋರ್ಟ್​ನಿಂದ ಗಡಿಯೊಳಗೆ ಎಂಟ್ರಿ ಕೊಟ್ಟಿದ್ದಾರೆ ಅಂತ ಇಂಟಲಿಜೆನ್ಸ್ ಬ್ಯುರೋ ಮಾಹಿತಿ ನೀಡಿದೆ.

ಅಲ್ಲದೇ ರಾಜ್ಯ ಪೊಲೀಸರು ಅಲರ್ಟ್​ ಆಗಿರುವಂತೆ ಕೇಂದ್ರ ಇಂಟಲಿಜೆನ್ಸ್‌ ಬ್ಯೂರೋ ತಂಡ ಸೂಚನೆ ನೀಡಿದೆ. ಈ ಮಧ್ಯೆ ಒಂದು ಕಡೆ ವಿಶ್ವಕಪ್‌ ಕ್ರಿಕೆಟ್ ಮ್ಯಾಚ್‌ಗಲು ನಡೆಯುತ್ತಿವೆ. ಮತ್ತೊಂದು ಕಡೆ ದಸರಾ ಉತ್ಸವಕ್ಕೆ ನಡೀತಿದೆ. ಕ್ರಿಕೆಟ್ ಜೊತೆಗೆ ದಸರಾ ಬಂದೋಬಸ್ತ್ ಸಹ ಹೆಚ್ಚಳಕ್ಕೆ ಐಬಿ ಸೂಚನೆ ನೀಡಿದೆ. ಹೀಗಾಗಿ ರಾಜ್ಯದ ಎಲ್ಲಾ ವಲಯ, ಸಿಐಡಿ, ಐಎಸ್​ಡಿಯಿಂದಲೂ ಬಿಗಿ ಭದ್ರತೆ ನಿಯೋಜನೆ ಮಾಡಾಲಾಗಿದೆ. ಈ ಬಾರಿ ದಸರಾಕ್ಕೆ 3,500ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿದೆ. 40 ಸಿಎಆರ್‌ ತುಕಡಿಗಳು, 30 KSRP ತುಕಡಿಗಳನ್ನೂ ದಸರಾ ಭದ್ರತೆಗೆ ಹಾಕಲಾಗಿದೆ.

ಮೈಸೂರಿನಲ್ಲಿ ಭದ್ರತೆ ಹೆಚ್ಚಿಸಿದ್ದೇವೆ ಎಂದ ಕಮಿಷನರ್

ಅರಮನೆ ನಗರಿಯಲ್ಲಿ ಪೊಲೀಸ್‌ ಭದ್ರತೆ ಹೆಚ್ಚಳದ ಬಗ್ಗೆ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾಹಿತಿ ನೀಡಿದ್ದಾರೆ.. ದಸರಾ ವೇಳೆ ನಗರದಲ್ಲೆಡೆ ಹದ್ದಿನ ಕಣ್ಣಿಟ್ಟಿರೋದಾಗಿ ಕಮಿಷನರ್ ತಿಳಿಸಿದ್ದಾರೆ. ಇನ್ನೂ ಮೈಸೂರು ದಸರಾ ಮೇಲೆ ಉಗ್ರರ ಕರಿಛಾಯೆ ಬಿದ್ದಿದೆ ಎಂಬ ಮಾತಿಗೆ ಡಿಸಿ ಅಭಯ ಹೇಳಿದ್ದಾರೆ. ಪೊಲೀಸ್ ಇಲಾಖೆ ನಗರದಲ್ಲಿ ಪುಲ್ ಅಲರ್ಟ್ ಆಗಿದ್ದು, ಯಾವುದೇ ಆತಂಕವಿಲ್ಲ ಎಂಬ ಮಾತುಗಳನ್ನಾಡಿದ್ದಾರೆ. ಒಟ್ಟಾರೆ, ಜಗತ್‌ ವಿಖ್ಯಾತ ನಾಡಹಬ್ಬ ದಸರಾ ಜಂಬೂಸವಾರಿಗೆ ಕೌಂಟ್‌ ಡೌನ್ ಶುರುವಾಗಿದೆ. ಈ ಹೊತ್ತಲ್ಲಿ ಭಯೋತ್ಪದಕರ ವಕ್ರದೃಷ್ಟಿ ದಸರಾ ಮೇಲೆ ಬಿದ್ದಿರೋದು ಆತಂಕಕ್ಕೆ ಕಾರಣವಾಗಿದೆ.. ಆದ್ರೆ, ದುಷ್ಟರ ಶಿಕ್ಷಕಿ ಶಿಷ್ಟರ ರಕ್ಷಕಿ ಚಾಮುಂಡೇಶ್ವರಿಯೇ ನಾಡಿನ ಜನರನ್ನ ಕಾಪಾಡುತ್ತಾಳೆ ಅನ್ನೋದು ಲಕ್ಷಾಂತರ ಭಕ್ತರ ನಂಬಿಕೆ.

You cannot copy content from Baravanige News

Scroll to Top