ಕಾರ್ಕಳ : ಕೇವಲ ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆಯೊಬ್ಬಳು ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಮಂಗಿಲಾರು ಎಂಬಲ್ಲಿ ನಡೆದಿದೆ.
ಹಿರ್ಗಾನ ಗ್ರಾಮದ ಮನೋಜ್ ಆಚಾರ್ಯ ಎಂಬವರ ಪತ್ನಿ ಅಶ್ವಿನಿ (25) ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ.
ಈದು ಗ್ರಾಮದ ಮುಳಿಕಾರು ಎಂಬಲ್ಲಿನ ಅಶ್ವಿನಿಗೆ ಹಿರ್ಗಾನ ಗ್ರಾಮದ ಮನೋಜ್ ಎಂಬವರ ಜತೆ ಕಳೆದ ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು ಎನ್ನಲಾಗಿದೆ.
ಇದೀಗ ನವವಿವಾಹಿತೆ ಅಶ್ವಿನಿ ಸಾವಿನ ಕುರಿತು ಆಕೆಯ ಹೆತ್ತವರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಶ್ವಿನಿ ಸಾವಿಗೆ ನೈಜ ಕಾರಣ ಏನು ಎನ್ನುವ ಕುರಿತು ತನಿಖೆ ನಡೆಸುತ್ತಿದ್ದಾರೆ.