ಉಡುಪಿ: 39 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ..!

ಉಡುಪಿ, ನ.10: ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ 39 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಡುಪಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಪ್ರಕಾಶ್ (62) ಎಂದು ಗುರುತಿಸಲಾಗಿದೆ.


ನವೆಂಬರ್ 09 ರಂದು ಅಂಧೇರಿ ಪೂರ್ವ ಮುಂಬೈನ ಸಾಕಿನಾಕಾದಿಂದ ಪ್ರಕಾಶ್ ಅವರನ್ನು ಬಂಧಿಸಲಾಯಿತು. ಅವರು ತಮ್ಮ ಮೂಲ ಗುರುತನ್ನು ಮರೆಮಾಚಿ ಅಲ್ಲಿ ವಾಸಿಸುತ್ತಿದ್ದರು ಮತ್ತು ಗುರುತಿಗಾಗಿ “ಗಣೇಶ್” ಎಂಬ ನಕಲಿ ಹೆಸರನ್ನು ಬಳಸುತ್ತಿದ್ದರು.

ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಪ್ರಕಾಶ್ ಆರೋಪಿ.

ಕುಂದಾಪುರ ಠಾಣೆಯ ಪೊಲೀಸ್ ನಿರೀಕ್ಷಕ ನಂದಕುಮಾರ್ ಯು.ಬಿ, ವಿನಯ ಎಂ.ಕೊರ್ಲಹಳ್ಳಿ, ಕಾನೂನು ಸುವ್ಯವಸ್ಥೆ, ಪಿ.ಎಸ್.ಐ. ಕುಂದಾಪುರ ಠಾಣೆ ಹಾಗೂ ಠಾಣಾ ಸಿಬ್ಬಂದಿಗಳಾದ ಶ್ರೀಧರ್, ರಮಾ, ಸಂತೋಷ್ ನೇತೃತ್ವದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಚಂದ್ರಶೇಖರ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ.

You cannot copy content from Baravanige News

Scroll to Top